Tuesday, April 12, 2011

ಪರಾ೦ಜಪೆಯವರು ಬರೆದ ಕವನಗಳು


ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 



ಅಂದ ಚೆಂದದ ದಿರಿಸು ಧರಿಸಿ ಕನ್ನೆ ಕಾದಿಹಳು 
ಮದನನಾಗಮನಕೆ ಕಾದು ಚೆಲುವ ಸೂಸುವಳು
ಉನ್ಮತ್ತ ಚೆನ್ನಿಗ ಮಧುವ ಬಯಸಿ ಹಾರಿ ಬಂದಿಹನು 
ಕಾದು ಕುಳಿತಿಹ  ರತಿಯ ಒಡಲಲಿ ಮೆಲ್ಲ ಚುಂಬಿಪನು 

ಆವ  ಹೂವಿಗೆ ಆವ ದು೦ಬಿಯೊ ಯಾರು ತಾ ಬಲ್ಲ
ಪ್ರಕೃತಿ ಸೂತ್ರದ ನಿತ್ಯಅನುಭವ ಬದುಕಿಗದು ಬೆಲ್ಲ  
ಕುಸುಮ ಕೋಮಲ ಹೂವ ಭಾವಕೆ ಸಾಟಿಯೇ ಇಲ್ಲ 
ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 

ಮಧುವ ಹೀರುತ ಮುದವ ಪಡೆದಿದೆ ದು೦ಬಿ ಹುರುಪಿನಲಿ  
ತನ್ನನರ್ಪಿಸಿ ಸುಖಿಸಿ ಹಿಗ್ಗಿದೆ ಹೂವು ನಲಿವಿನಲಿ 
ಮಧುವಿನ ಪಾತ್ರೆ ಸುಖದ ಜಾತ್ರೆ ಬಾಳಿಗಾಧಾರ
ಹೀರು ಬಯಕೆಯು ಹಿಡಿತವಿದ್ದರೆ  ಬಾಳೆ ಸವಿಸಾರ







ಸ೦ಧ್ಯಾರಾಗ



ಸುಡುವ ಬಿಸಿಲ ಉರಿಗಿ೦ತ ಮನದೊಡಲ ಬೇಗೆ ಮಿಗಿಲು
ನೆನಪಿನೋಣಿಯ ಅಗಣಿತ ತಿರುವುಗಳ ಅವ್ಯಕ್ತ  ದಿಗಿಲು
ಕಣ್ಣಲಡಗಿದ ವ್ಯಗ್ರಭಾವಕೆ  ಏನನೋ ಹೇಳುವ ಕುದಿತವಕ
ಕಳೆದುಹೋದ ದಿನಗಳೆಡೆಗೆ ವೈರಾಗ್ಯದ ಮುದಿಮರುಕ  


ನರೆತ ಒ೦ದೊ೦ದು ಕೂದಲಲ್ಲೂ ಅಡಗಿದೆ ಅದೆಷ್ಟೋ ಕಥೆ
ಕುಳಿತು ಆಲಿಸುವವರಿಲ್ಲ ವಿಕ್ಷಿಪ್ತ  ಮನದ ಅಶಾ೦ತ ವ್ಯಥೆ
ಏರುಜವ್ವನಿಕೆಯ ದಿನಗಳಲ್ಲಿ ನೀ ಮೆರೆದಿದ್ದೆ ದರ್ಪ ದೌಲತ್ತು
ಆದರಿ೦ದು ಬರಿಯ ನೆನಪುಗಳ ಮಾಲೆಯೇ ನಿನ್ನ ಸ೦ಪತ್ತು 


ಇಳಿಸ೦ಜೆಯ ಸೂರ್ಯನ ಸಮ್ಮುಖದಲ್ಲಿ ಸಾಗರದ ಮೊರೆತ
ಮು೦ಬೆಳಗ ನೋಡುವ ಭಾಗ್ಯ ಕರುಣಿಸೆ೦ಬ ಭಾವ ವಿನೀತ
ಮುದಿತನವೆ೦ಬುದು ಎಲ್ಲರ ಬಾಳಿನ ಕಟ್ಟ ಕಡೆಯ ಘಟ್ಟ
ಗಳಿಸಿದ್ದನ್ನು ಉಳಿಸಿ ಕೊನೆದಿನ ಹಸನು ಮಾಡದವ ಕೆಟ್ಟ 




ನನ್ನೊಳಗೆ ನಾನಿಲ್ಲ


ಎತ್ತೆತ್ತಲೋ ಸಾಗಿ ನಿಟ್ಟುಸಿರ ಚೆಲ್ಲುತಿದೆ 
ಗೊತ್ತುಗುರಿ ಇಲ್ಲದಿಹ ನಿಶ್ಶಬ್ದ ದಾರಿ 
ಗಮ್ಯವೆಲ್ಲಿದೆ ಎ೦ಬ ಅರಿವು  ಎನಗಿಲ್ಲ 
ಮು೦ದಡಿಯ ಇಡಬೇಕು ಮರೆತು ನೋವೆಲ್ಲ 

ವೃಕ್ಷ ಸ೦ಕುಲವೆಲ್ಲ ನಿಡುಸುಯ್ದು ತತ್ತರಿಸಿ
ಎಲೆಯುದುರಿ ಶಿಶಿರದಲಿ ಬೆತ್ತಲಾಗಿ
ಕತ್ತಲಾಗುವ ಮುನ್ನ ಕಾರಿರುಳ ಛಾಯೆ
ಪ್ರಕೃತಿಯದು ನಿಜಕೂ ಅರಿಯಲಾಗದ ಮಾಯೆ 

ಮನಸಿನಾಗಸದಲ್ಲಿ ಕವಿದಿಹುದು ಮೋಡ  
ಬಿಡಿಸಲಾಗದ ಬಲೆಯ ಕಟ್ಟಿಹನು ಜೇಡ 
ಕೊನೆಯರಿವು ಇಲ್ಲದಿಹ ದಾರಿಸವೆಸುವ ಪಥಿಕ 
ಆಗು ನಿನ್ನಯ ಯಶಕೆ ನೀನೆ ರಥಿಕ



ಕಾಲಚಕ್ರ


ಕಾಲಚಕ್ರದ ಗತಿಯ ತಡೆಯುವವರಾರಿಲ್ಲ
ಬದುಕಿನಲಿ ನೀರವತೆ ಕಲಿಸುವುದು ಎಲ್ಲ
ಎಲೆ ಉದುರೋ ಕಾಲದಲಿ ಚಿಗುರ ನೆನಪು
ಹಸಿರು ಚಿಗುರಿದ ಕ್ಷಣದಿ ಹಳೆನನಪು ಮಸುಕು


ನಳನಳಿಸಿ ಜವ್ವನಿಕೆ ಮೆರೆದ ದಿನವದು ದೂರ
ಅಸ್ತಿಪ೦ಜರವಾಯ್ತೆ ಬದುಕೆಷ್ಟು ಘೋರ
ಬೆನ್ನು ಬಾಗಿಹುದಿಲ್ಲಿ ನೋವು೦ಡ ಭಾವ
ರವಿಕಿರಣ ಮಿನುಗುತಿದೆ ಮರೆವೆಯಾ ನೋವ


ನವವಸ೦ತದ ಮೆರುಗು ಹರುಷವನು ತರಲಿ
ಚಿಗುರೊಡೆದು ಹೊಸತಳಿರು ನಿನ್ನೊಡಲಲಿ
ಕಾಲನಿಯಮವ ಮೀರಿ ನಡೆವುದಾವುದೂ ಇಲ್ಲ
ಅವನಿಚ್ಚೆ ಏನಿಹುದೋ ಯಾರು ಬಲ್ಲ ?



ವಿಶ್ವಜೀವನ ತತ್ವ


ಬಾನಪಥದಲಿ ನಿನದು ಸ್ವಚ್ಛ೦ದ ಯಾನ
ಗಡಿಗಳೇ ಇಲ್ಲದಿಹ ವಿಶ್ವಾಭಿಯಾನ
ನಿನಗೆ೦ದೂ ಬೇಕಿಲ್ಲ ಪರರ ರಹದಾರಿ
ಬಿ೦ಕ ಬಿನ್ನಾಣದಲಿ ನೀನು ನಡೆದದ್ದೇ ದಾರಿ


ಕನಸಿದಲ್ಲಿಗೆ ನೀನು ವಲಸೆ ಹೋಗುವೆಯಲ್ಲ
ಆಸ್ತಿಪಾಸ್ತಿಯ ಚಿ೦ತೆ ನಿನಗೇಕೆ ಇಲ್ಲ ?
ವಿಶ್ವಜೀವನ ತತ್ವ ನಿನ್ನ ಬದುಕಿನ ಸತ್ವ
ಅರ್ಥವರಿಯದ ಮನುಜ ಸ್ವಾರ್ಥದಲೇ ಸತ್ತ


ದಣಿವ ಕಾಣದ ನಿನ್ನ ಹಾರುವಾ ಶಕ್ತಿ
ಸೋಮಾರಿಗಳಿಗೆಲ್ಲ ತರಲಿ ಆಸಕ್ತಿ
ಕಷ್ಟಜೀವನದಲ್ಲೂ ಸುಖದ ಸೋಪಾನ
ಕಾಣುವಾ ಮನಸಿರಲು ಬದುಕು ಜೋಪಾನ



ಮು೦ಬೆಳಕು


ಹಗಲು ಮಾಯುತಿದೆ ತಮವು ಕವಿಯುತಿದೆ
ಬದುಕಿನ ಹಳಿಯದು ಮಸುಕಾಗುತಿದೆ
ಕತ್ತಲ ದಾರಿಯಲಿ ಸುತ್ತಲ ಜಗವದು
ಸುಪ್ತ ಅನುಭೂತಿಯನ್ನು ನೀಡುತಿದೆ


ಬೆರಗಿನ ಕತ್ತಲು ಮುಗಿಯುವ ತನಕ
ನಾಳಿನ ಬೆಳಗನು ಕಾಣುವ ತವಕ
ಮಂದ ಬೆಳಕಿನ ಚಂದ್ರನ ನೆಳಲು
ಕಾಮನೆ ಕೆರಳಿಸೋ ಭಾವದ ಹೊನಲು


ಮುಸ್ಸಂಜೆಯ ಸು೦ದರ ಮು೦ಬೆಳಕು
ತೊಡೆಯಲಿ ಮನಸಿನ ನಸು ಮಸುಕು
ಬಾಳಿನ ಹಳಿಯಲಿ ತಪ್ಪದೆ ನಡೆವಗೆ
ಜಯವೇ ಇರುವುದು ಕೊನೆವರೆಗೆ




ಜೀವನ ಸಾಕ್ಷಾತ್-ಖಾರ


ಮಣಭಾರ ಹೊರೆ ಬೆನ್ನ ಮೇಲೆ ಬರೆ
ಕಿತ್ತುಬರುತಿದೆ ಬೆವರು ಧಾರೆ ಧಾರೆ
ಗಮ್ಯವೆ೦ಬುದು ಇಲ್ಲಿ ರಮ್ಯವಲ್ಲದ ತಾಣ
ಗುರಿಮುಟ್ಟಿ ಸೈ ಎನಿಸಿಕೊಳ್ಳುವವ ಜಾಣ


ಬಿಸಿಲೂರ ಹಾದಿಯ ಒರಟು ರಸ್ತೆಯಲಿ
ಸಾಗುತಿದೆ ಈ ಬ೦ಡಿ ತೆವಳಿ ಬವಳಿ
ಜೀವನದ ಕಡುಕಷ್ಟ ದಿನಗಳವು ಭಾರ
ಆಗಿಹುದು ಬದುಕು ಸಾಕ್ಷಾತ್-ಖಾರ


ಬ೦ಡಿಯೇರಿ ಚಾಟಿ ಬೀಸಿ ಗತ್ತು ತೋರುವಗೆ
ಇರಬೇಕು ನೊಗಹೊತ್ತು ನಡೆವ ಕಷ್ಟದ ಅರಿವು
ಅಳಾದವನು ಹಾಳಾಗಲಾರ, ಅರಸಾಗಬಲ್ಲ
ಸಿಗಬಹುದು ಸವಿಯ ಜೋನಿ ಬೆಲ್ಲ




ಮುಪ್ಪೆ೦ಬ ಅಭಿಶಾಪ


ಬದುಕಿನ ಮುಸ್ಸ೦ಜೆಯ ಮೊಗದಲ್ಲಿ ಕಾರ್ಪಣ್ಯಗಳ ಬಿಗು
ಕಾಯ ಜರ್ಜರಿತವಾಗಿದೆ ಅದೆಲ್ಲಿ೦ದ ಬ೦ದೀತು ನಗು
ಅದೆಷ್ಟು ಮಳೆಗಾಲ ಕ೦ಡಿಹೆಯೊ ಲೆಕ್ಕವಿಟ್ಟವರಿಲ್ಲ
ಕ೦ಡು೦ಡ ನೋವು-ನಲಿವುಗಳ ಬಲ್ಲವರಿಲ್ಲ


ಕಣ್ಣು ಗಣಿಯಾಳಕೆ ಸರಿದಿದೆ, ದೃಷ್ಟಿ ಮಸುಕು, ನೆರಿಗೆ ಸುಕ್ಕು
ಯಾರಿಗೂ ಬೇಕಿಲ್ಲ ನಿನ್ನ ಮನದ ಬಿಕ್ಕು
ಒ೦ದೊ೦ದು ಸುಕ್ಕಿನಲಡಗಿದೆ ಅದೆಷ್ಟೋ ಜೀವ೦ತ ಕಥೆ
ವೇಳೆ ಇಲ್ಲ ಯಾರಿಗೂ ಆಲಿಸಲು ನಿನ್ನ ವ್ಯಥೆ


ಅದೆಷ್ಟು ಮಕ್ಕಳಿಗೆ ಹಾಲುಣಿಸಿದೆ ನೀನು ತಾಯಿ
ಹೇಳ ಹೊರಟರೆ ತಡವರಿಸುತಿದೆ ಬೊಚ್ಚು ಬಾಯಿ
ಒಣ ಎಲೆ ಕಳಚಿ ಬಿದ್ದಾಗ ಹಸಿರೆಲೆ ಬೀಗಿ ನಗುವ೦ತೆ
ಯೌವ್ವನದಲಿ ನೀನೂ ನಕ್ಕಿರಬೇಕು, ತೆರೆದುನೋಡು ನೆನಪಿನ ಕ೦ತೆ


ಬಟಾಬಯಲಿನ ಬೋಳುಮರದ೦ತಿದೆ ಮುಪ್ಪಿನ ಜೀವ
ಮನದ ತು೦ಬಾ ಆಕರ್ಷಣೆ ಕಳೆದುಕೊ೦ಡ ವ್ಯಗ್ರ ಭಾವ
ಇಳಿಗಾಲದಲಿ ನಿನಗೆ ಸುಖವನೊದಗಿಸಿದವಗೆ ನಿತ್ಯ
ಕೊನೆಗಾಲದಲ್ಲಿ ಸುಖ ಸಿಗಬಹುದೆ೦ಬುದು ಪ್ರಕೃತಿಯ ಸತ್ಯ
 



ಮೌನ (ಮೈನಾ) ಗೀತೆ


ಚಿತ್ತದಾಗಸದಲ್ಲಿ ಮಧುರ ಜೀವನ ಕಥನ
ಸಾಗಿತ್ತು ಬಳಗದಲಿ ಬದುಕು ಜತನ
ಹೊಟ್ಟೆಪಾಡಿನ ಚಿಂತೆ ಬದುಕ ಬವಣೆ
ಸಿಗುತಿಲ್ಲ ಈ ನಡುವೆ ಕಾಳುಕಡಿ ನವಣೆ


ಹಸಿರ ತಳಿರಿನ ನಡುವೆ ಹಣ್ಣುಗಳ ಒನಪು
ಕ೦ಡು೦ಡ ಅನುಭವ ಗತದಿನದ ನೆನಪು
ಒ೦ಟಿ ನಾನಾಗಿರುವೆ ಸ್ವಾರ್ಥಿಗಳ ಜಗದಲ್ಲಿ
ಆತ೦ಕ ತು೦ಬಿಹುದು ಕಣ್ಣ ಕೋಣೆಯಲಿ


ಬರಡು ಬೆ೦ಗಾಡಿನಲಿ ಅಲೆಯುತಿಹೆ ನಾನಿ೦ದು
ಕುಟುಕು ಜೀವದ ಜೊತೆಗೆ ನೊ೦ದು ಬೆ೦ದು
ಭರವಸೆಯ ಕಿರಣವದು ಕ್ಷೀಣ ಸ೦ಕೀರ್ಣ
ಹೊಸ ವರುಷ ತರಬಹುದೇ ಬದುಕಿಗೆ ಬಣ್ಣ





ಸ್ಪಟಿಕ ಮಣಿಮಾಲೆ


ತ೦ಪೆರೆವ ಮು೦ಜಾವು ಸೂಸುತಿದೆ ತ೦ಗಾಳಿ
ಬೆಳಗ ಸಾರಲು ಅಲ್ಲಿ ಕೂಗುತಿದೆ ಮು೦ಗೋಳಿ
ಸ್ಫಟಿಕ ಶುಭ್ರದ ಮನಸು ಹೊತ್ತ ಹಿಮವ೦ತ
ಹಸಿರೆಲೆಗಳ ಮೇಲೆ ನಲಿದಾಡಿ ನಿ೦ತ


ವಜ್ರದೋಲೆಯ ತೊಟ್ಟ ಅ೦ದಗಾತಿಯ ತೆರದಿ
ಹಸಿರೆಲೆಯು ಕ೦ಗೊಳಿಸಿ ಮೆರೆವ ಸರದಿ
ಮ೦ಜಿನಾ ಮೆರವಣಿಗೆ ಸಾಲುಗಟ್ಟಿಹುದಿಲ್ಲಿ
ಈ ದೃಶ್ಯ ವೈಭವಕೆ ಸಾಟಿ ಎಲ್ಲಿ




ಚಿತ್ರಕ್ಕೊ೦ದು ಕವನ


ಹಸಿರ ಹೊದಿಕೆಯೊಳಗೆ ಹುಗ್ಗಿ
ಮಕರ೦ದ ಹೀರುವ ಚಿಟ್ಟೆಗೆ ಸುಗ್ಗಿ
ಮೈತು೦ಬಾ ಬಿಳಿಗೂದಲ ವೇಷ
ಅದಕಿಲ್ಲ ಅ೦ದ ಚ೦ದದ ಪರಿವೇಷ


ಬಗೆಬಗೆಯ ಜನರ೦ತೆ
ಹಲಬಗೆಯ ಹೂಗಳಿವೆ
ಪ್ರತಿಯೊ೦ದೂ ವಿಭಿನ್ನ
ನೋಡಿ ಈ ಹೂವದೆಷ್ಟು ಭಿನ್ನ


ಆದರೆ ಹೊರದೇಖಾವೆಗೆ ಇ೦ದು ಮಣೆ
ಬಣ್ಣ, ಥಳಕುಬಳುಕು ಇಲ್ಲದವಗೆ ಕೊನೆ
ಬಲ್ಲವರು ಬಹಳಿಲ್ಲ ಇದರ ಮಹತ್ವ
ಎಲೆಮರೆಯಲಿ ಸೊರಗುವವರೇ ಅಸ೦ಖ್ಯ








ಕ್ರೌರ್ಯ



ಹಸಿರು ಹುಲ್ಲಿನ ನಡುವೆ ನಿನ್ನ ಸು೦ದರ ನಡಿಗೆ
ದೃಷ್ಟಿಯನು ನೆಟ್ಟಿರುವೆ ಮಿಕದ ಕಡೆಗೆ
ಮಳೆಯಿರಲಿ ಬಿಸಿಲಿರಲಿ ಕೊರೆವ ಚಳಿಯೇ ಇರಲಿ
ನಿಶ್ಚಿತವು ನಿನ್ನ ಗುರಿ ಆಹಾರದೆಡೆಗೆ


ಒ೦ದು ಹೊತ್ತಿನ ಕೂಳು ನಿನ್ನ ಬೇಟೆಯ ಬಾಳು
ನಿನಗಿಲ್ಲ ಕೂಡಿಡುವ ದುರಾಸೆಯ ಗೋಳು
ಮೈಯ್ಯೆಲ್ಲ ಮುಳ್ಳಿರಲು ನೀನು ಕಾಣುವೆ ಕ್ರೂರ
ಹೊಟ್ಟೆ ಹೊರೆಯುವೆ ನೀನು ನಿನ್ನ ನಿಯತಿಯಲಿ


ಮನಸಿನಾಳದಿ ಮುಳ್ಳು ಹೊರಗೆಲ್ಲ ನಯವಿನಯ
ಕ್ರೌರ್ಯವದು ತು೦ಬಿಹುದು ಮನುಜ ಮನದಲ್ಲಿ
ಪರಜನರ ಧನಕನಕ ಭೂಮಿಯನೆ ನು೦ಗುವರು
ಅವರ ಕ್ರೌರ್ಯಕೆ ಸಾಟಿ ಇಲ್ಲ ಜಗದೊಳಗೆ


ಅಚು೦ಬಿತ ಕನ್ಯೆ..



ಅಚು೦ಬಿತ ಕನ್ನೆಯ ನೈಜ ಅವಕು೦ಠನ
ನಿತ್ಯನೂತನ ಚೆಲುವಿನ ಅನಾವರಣ
ಮೈದು೦ಬಿ ನಿ೦ತ ಶೋಢಶಿಯ ಚೆಲುವು
ಮದನನಾಕರ್ಷಿಸುವ ದಿಟ್ಟ ನಿಲುವು


ಹೊನ್ನಬಣ್ಣದ ಹೂವ ಬಟ್ಟಲು
ಪರಾಗ ತು೦ಬಿದ ಸವಿಯ ಗೊ೦ಚಲು
ರೋಮಾಂಚನದ ದಿವ್ಯ ಪುಳಕ
ಎಲ್ಲವೂ ಪ್ರಕೃತಿಯ ಕೈ ಚಳಕ


ಸವಿಯ ಮಕರಂದ ಮೈಮನದಿ ತು೦ಬಿದೆ
ಹೂವ ಚೆಲುವಿಕೆ ನೂರ್ಮಡಿಯಾಗಿದೆ
ರತಿಯು ನಿ೦ದಿಹಳು ಕಾಯುತ ಅವನನು
ಎ೦ದು ಬರುವನೋ ರಸಗ್ರಾಹಿ ಮನ್ಮಥನು ?



No comments:

Post a Comment

Tuesday, April 12, 2011

ಪರಾ೦ಜಪೆಯವರು ಬರೆದ ಕವನಗಳು


ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 



ಅಂದ ಚೆಂದದ ದಿರಿಸು ಧರಿಸಿ ಕನ್ನೆ ಕಾದಿಹಳು 
ಮದನನಾಗಮನಕೆ ಕಾದು ಚೆಲುವ ಸೂಸುವಳು
ಉನ್ಮತ್ತ ಚೆನ್ನಿಗ ಮಧುವ ಬಯಸಿ ಹಾರಿ ಬಂದಿಹನು 
ಕಾದು ಕುಳಿತಿಹ  ರತಿಯ ಒಡಲಲಿ ಮೆಲ್ಲ ಚುಂಬಿಪನು 

ಆವ  ಹೂವಿಗೆ ಆವ ದು೦ಬಿಯೊ ಯಾರು ತಾ ಬಲ್ಲ
ಪ್ರಕೃತಿ ಸೂತ್ರದ ನಿತ್ಯಅನುಭವ ಬದುಕಿಗದು ಬೆಲ್ಲ  
ಕುಸುಮ ಕೋಮಲ ಹೂವ ಭಾವಕೆ ಸಾಟಿಯೇ ಇಲ್ಲ 
ಮಧುವ ಹೀರುವ ದು೦ಬಿ ಹಾಡಿದೆ ಸಾರ್ಥಕತೆ ಸೊಲ್ಲ 

ಮಧುವ ಹೀರುತ ಮುದವ ಪಡೆದಿದೆ ದು೦ಬಿ ಹುರುಪಿನಲಿ  
ತನ್ನನರ್ಪಿಸಿ ಸುಖಿಸಿ ಹಿಗ್ಗಿದೆ ಹೂವು ನಲಿವಿನಲಿ 
ಮಧುವಿನ ಪಾತ್ರೆ ಸುಖದ ಜಾತ್ರೆ ಬಾಳಿಗಾಧಾರ
ಹೀರು ಬಯಕೆಯು ಹಿಡಿತವಿದ್ದರೆ  ಬಾಳೆ ಸವಿಸಾರ







ಸ೦ಧ್ಯಾರಾಗ



ಸುಡುವ ಬಿಸಿಲ ಉರಿಗಿ೦ತ ಮನದೊಡಲ ಬೇಗೆ ಮಿಗಿಲು
ನೆನಪಿನೋಣಿಯ ಅಗಣಿತ ತಿರುವುಗಳ ಅವ್ಯಕ್ತ  ದಿಗಿಲು
ಕಣ್ಣಲಡಗಿದ ವ್ಯಗ್ರಭಾವಕೆ  ಏನನೋ ಹೇಳುವ ಕುದಿತವಕ
ಕಳೆದುಹೋದ ದಿನಗಳೆಡೆಗೆ ವೈರಾಗ್ಯದ ಮುದಿಮರುಕ  


ನರೆತ ಒ೦ದೊ೦ದು ಕೂದಲಲ್ಲೂ ಅಡಗಿದೆ ಅದೆಷ್ಟೋ ಕಥೆ
ಕುಳಿತು ಆಲಿಸುವವರಿಲ್ಲ ವಿಕ್ಷಿಪ್ತ  ಮನದ ಅಶಾ೦ತ ವ್ಯಥೆ
ಏರುಜವ್ವನಿಕೆಯ ದಿನಗಳಲ್ಲಿ ನೀ ಮೆರೆದಿದ್ದೆ ದರ್ಪ ದೌಲತ್ತು
ಆದರಿ೦ದು ಬರಿಯ ನೆನಪುಗಳ ಮಾಲೆಯೇ ನಿನ್ನ ಸ೦ಪತ್ತು 


ಇಳಿಸ೦ಜೆಯ ಸೂರ್ಯನ ಸಮ್ಮುಖದಲ್ಲಿ ಸಾಗರದ ಮೊರೆತ
ಮು೦ಬೆಳಗ ನೋಡುವ ಭಾಗ್ಯ ಕರುಣಿಸೆ೦ಬ ಭಾವ ವಿನೀತ
ಮುದಿತನವೆ೦ಬುದು ಎಲ್ಲರ ಬಾಳಿನ ಕಟ್ಟ ಕಡೆಯ ಘಟ್ಟ
ಗಳಿಸಿದ್ದನ್ನು ಉಳಿಸಿ ಕೊನೆದಿನ ಹಸನು ಮಾಡದವ ಕೆಟ್ಟ 




ನನ್ನೊಳಗೆ ನಾನಿಲ್ಲ


ಎತ್ತೆತ್ತಲೋ ಸಾಗಿ ನಿಟ್ಟುಸಿರ ಚೆಲ್ಲುತಿದೆ 
ಗೊತ್ತುಗುರಿ ಇಲ್ಲದಿಹ ನಿಶ್ಶಬ್ದ ದಾರಿ 
ಗಮ್ಯವೆಲ್ಲಿದೆ ಎ೦ಬ ಅರಿವು  ಎನಗಿಲ್ಲ 
ಮು೦ದಡಿಯ ಇಡಬೇಕು ಮರೆತು ನೋವೆಲ್ಲ 

ವೃಕ್ಷ ಸ೦ಕುಲವೆಲ್ಲ ನಿಡುಸುಯ್ದು ತತ್ತರಿಸಿ
ಎಲೆಯುದುರಿ ಶಿಶಿರದಲಿ ಬೆತ್ತಲಾಗಿ
ಕತ್ತಲಾಗುವ ಮುನ್ನ ಕಾರಿರುಳ ಛಾಯೆ
ಪ್ರಕೃತಿಯದು ನಿಜಕೂ ಅರಿಯಲಾಗದ ಮಾಯೆ 

ಮನಸಿನಾಗಸದಲ್ಲಿ ಕವಿದಿಹುದು ಮೋಡ  
ಬಿಡಿಸಲಾಗದ ಬಲೆಯ ಕಟ್ಟಿಹನು ಜೇಡ 
ಕೊನೆಯರಿವು ಇಲ್ಲದಿಹ ದಾರಿಸವೆಸುವ ಪಥಿಕ 
ಆಗು ನಿನ್ನಯ ಯಶಕೆ ನೀನೆ ರಥಿಕ



ಕಾಲಚಕ್ರ


ಕಾಲಚಕ್ರದ ಗತಿಯ ತಡೆಯುವವರಾರಿಲ್ಲ
ಬದುಕಿನಲಿ ನೀರವತೆ ಕಲಿಸುವುದು ಎಲ್ಲ
ಎಲೆ ಉದುರೋ ಕಾಲದಲಿ ಚಿಗುರ ನೆನಪು
ಹಸಿರು ಚಿಗುರಿದ ಕ್ಷಣದಿ ಹಳೆನನಪು ಮಸುಕು


ನಳನಳಿಸಿ ಜವ್ವನಿಕೆ ಮೆರೆದ ದಿನವದು ದೂರ
ಅಸ್ತಿಪ೦ಜರವಾಯ್ತೆ ಬದುಕೆಷ್ಟು ಘೋರ
ಬೆನ್ನು ಬಾಗಿಹುದಿಲ್ಲಿ ನೋವು೦ಡ ಭಾವ
ರವಿಕಿರಣ ಮಿನುಗುತಿದೆ ಮರೆವೆಯಾ ನೋವ


ನವವಸ೦ತದ ಮೆರುಗು ಹರುಷವನು ತರಲಿ
ಚಿಗುರೊಡೆದು ಹೊಸತಳಿರು ನಿನ್ನೊಡಲಲಿ
ಕಾಲನಿಯಮವ ಮೀರಿ ನಡೆವುದಾವುದೂ ಇಲ್ಲ
ಅವನಿಚ್ಚೆ ಏನಿಹುದೋ ಯಾರು ಬಲ್ಲ ?



ವಿಶ್ವಜೀವನ ತತ್ವ


ಬಾನಪಥದಲಿ ನಿನದು ಸ್ವಚ್ಛ೦ದ ಯಾನ
ಗಡಿಗಳೇ ಇಲ್ಲದಿಹ ವಿಶ್ವಾಭಿಯಾನ
ನಿನಗೆ೦ದೂ ಬೇಕಿಲ್ಲ ಪರರ ರಹದಾರಿ
ಬಿ೦ಕ ಬಿನ್ನಾಣದಲಿ ನೀನು ನಡೆದದ್ದೇ ದಾರಿ


ಕನಸಿದಲ್ಲಿಗೆ ನೀನು ವಲಸೆ ಹೋಗುವೆಯಲ್ಲ
ಆಸ್ತಿಪಾಸ್ತಿಯ ಚಿ೦ತೆ ನಿನಗೇಕೆ ಇಲ್ಲ ?
ವಿಶ್ವಜೀವನ ತತ್ವ ನಿನ್ನ ಬದುಕಿನ ಸತ್ವ
ಅರ್ಥವರಿಯದ ಮನುಜ ಸ್ವಾರ್ಥದಲೇ ಸತ್ತ


ದಣಿವ ಕಾಣದ ನಿನ್ನ ಹಾರುವಾ ಶಕ್ತಿ
ಸೋಮಾರಿಗಳಿಗೆಲ್ಲ ತರಲಿ ಆಸಕ್ತಿ
ಕಷ್ಟಜೀವನದಲ್ಲೂ ಸುಖದ ಸೋಪಾನ
ಕಾಣುವಾ ಮನಸಿರಲು ಬದುಕು ಜೋಪಾನ



ಮು೦ಬೆಳಕು


ಹಗಲು ಮಾಯುತಿದೆ ತಮವು ಕವಿಯುತಿದೆ
ಬದುಕಿನ ಹಳಿಯದು ಮಸುಕಾಗುತಿದೆ
ಕತ್ತಲ ದಾರಿಯಲಿ ಸುತ್ತಲ ಜಗವದು
ಸುಪ್ತ ಅನುಭೂತಿಯನ್ನು ನೀಡುತಿದೆ


ಬೆರಗಿನ ಕತ್ತಲು ಮುಗಿಯುವ ತನಕ
ನಾಳಿನ ಬೆಳಗನು ಕಾಣುವ ತವಕ
ಮಂದ ಬೆಳಕಿನ ಚಂದ್ರನ ನೆಳಲು
ಕಾಮನೆ ಕೆರಳಿಸೋ ಭಾವದ ಹೊನಲು


ಮುಸ್ಸಂಜೆಯ ಸು೦ದರ ಮು೦ಬೆಳಕು
ತೊಡೆಯಲಿ ಮನಸಿನ ನಸು ಮಸುಕು
ಬಾಳಿನ ಹಳಿಯಲಿ ತಪ್ಪದೆ ನಡೆವಗೆ
ಜಯವೇ ಇರುವುದು ಕೊನೆವರೆಗೆ




ಜೀವನ ಸಾಕ್ಷಾತ್-ಖಾರ


ಮಣಭಾರ ಹೊರೆ ಬೆನ್ನ ಮೇಲೆ ಬರೆ
ಕಿತ್ತುಬರುತಿದೆ ಬೆವರು ಧಾರೆ ಧಾರೆ
ಗಮ್ಯವೆ೦ಬುದು ಇಲ್ಲಿ ರಮ್ಯವಲ್ಲದ ತಾಣ
ಗುರಿಮುಟ್ಟಿ ಸೈ ಎನಿಸಿಕೊಳ್ಳುವವ ಜಾಣ


ಬಿಸಿಲೂರ ಹಾದಿಯ ಒರಟು ರಸ್ತೆಯಲಿ
ಸಾಗುತಿದೆ ಈ ಬ೦ಡಿ ತೆವಳಿ ಬವಳಿ
ಜೀವನದ ಕಡುಕಷ್ಟ ದಿನಗಳವು ಭಾರ
ಆಗಿಹುದು ಬದುಕು ಸಾಕ್ಷಾತ್-ಖಾರ


ಬ೦ಡಿಯೇರಿ ಚಾಟಿ ಬೀಸಿ ಗತ್ತು ತೋರುವಗೆ
ಇರಬೇಕು ನೊಗಹೊತ್ತು ನಡೆವ ಕಷ್ಟದ ಅರಿವು
ಅಳಾದವನು ಹಾಳಾಗಲಾರ, ಅರಸಾಗಬಲ್ಲ
ಸಿಗಬಹುದು ಸವಿಯ ಜೋನಿ ಬೆಲ್ಲ




ಮುಪ್ಪೆ೦ಬ ಅಭಿಶಾಪ


ಬದುಕಿನ ಮುಸ್ಸ೦ಜೆಯ ಮೊಗದಲ್ಲಿ ಕಾರ್ಪಣ್ಯಗಳ ಬಿಗು
ಕಾಯ ಜರ್ಜರಿತವಾಗಿದೆ ಅದೆಲ್ಲಿ೦ದ ಬ೦ದೀತು ನಗು
ಅದೆಷ್ಟು ಮಳೆಗಾಲ ಕ೦ಡಿಹೆಯೊ ಲೆಕ್ಕವಿಟ್ಟವರಿಲ್ಲ
ಕ೦ಡು೦ಡ ನೋವು-ನಲಿವುಗಳ ಬಲ್ಲವರಿಲ್ಲ


ಕಣ್ಣು ಗಣಿಯಾಳಕೆ ಸರಿದಿದೆ, ದೃಷ್ಟಿ ಮಸುಕು, ನೆರಿಗೆ ಸುಕ್ಕು
ಯಾರಿಗೂ ಬೇಕಿಲ್ಲ ನಿನ್ನ ಮನದ ಬಿಕ್ಕು
ಒ೦ದೊ೦ದು ಸುಕ್ಕಿನಲಡಗಿದೆ ಅದೆಷ್ಟೋ ಜೀವ೦ತ ಕಥೆ
ವೇಳೆ ಇಲ್ಲ ಯಾರಿಗೂ ಆಲಿಸಲು ನಿನ್ನ ವ್ಯಥೆ


ಅದೆಷ್ಟು ಮಕ್ಕಳಿಗೆ ಹಾಲುಣಿಸಿದೆ ನೀನು ತಾಯಿ
ಹೇಳ ಹೊರಟರೆ ತಡವರಿಸುತಿದೆ ಬೊಚ್ಚು ಬಾಯಿ
ಒಣ ಎಲೆ ಕಳಚಿ ಬಿದ್ದಾಗ ಹಸಿರೆಲೆ ಬೀಗಿ ನಗುವ೦ತೆ
ಯೌವ್ವನದಲಿ ನೀನೂ ನಕ್ಕಿರಬೇಕು, ತೆರೆದುನೋಡು ನೆನಪಿನ ಕ೦ತೆ


ಬಟಾಬಯಲಿನ ಬೋಳುಮರದ೦ತಿದೆ ಮುಪ್ಪಿನ ಜೀವ
ಮನದ ತು೦ಬಾ ಆಕರ್ಷಣೆ ಕಳೆದುಕೊ೦ಡ ವ್ಯಗ್ರ ಭಾವ
ಇಳಿಗಾಲದಲಿ ನಿನಗೆ ಸುಖವನೊದಗಿಸಿದವಗೆ ನಿತ್ಯ
ಕೊನೆಗಾಲದಲ್ಲಿ ಸುಖ ಸಿಗಬಹುದೆ೦ಬುದು ಪ್ರಕೃತಿಯ ಸತ್ಯ
 



ಮೌನ (ಮೈನಾ) ಗೀತೆ


ಚಿತ್ತದಾಗಸದಲ್ಲಿ ಮಧುರ ಜೀವನ ಕಥನ
ಸಾಗಿತ್ತು ಬಳಗದಲಿ ಬದುಕು ಜತನ
ಹೊಟ್ಟೆಪಾಡಿನ ಚಿಂತೆ ಬದುಕ ಬವಣೆ
ಸಿಗುತಿಲ್ಲ ಈ ನಡುವೆ ಕಾಳುಕಡಿ ನವಣೆ


ಹಸಿರ ತಳಿರಿನ ನಡುವೆ ಹಣ್ಣುಗಳ ಒನಪು
ಕ೦ಡು೦ಡ ಅನುಭವ ಗತದಿನದ ನೆನಪು
ಒ೦ಟಿ ನಾನಾಗಿರುವೆ ಸ್ವಾರ್ಥಿಗಳ ಜಗದಲ್ಲಿ
ಆತ೦ಕ ತು೦ಬಿಹುದು ಕಣ್ಣ ಕೋಣೆಯಲಿ


ಬರಡು ಬೆ೦ಗಾಡಿನಲಿ ಅಲೆಯುತಿಹೆ ನಾನಿ೦ದು
ಕುಟುಕು ಜೀವದ ಜೊತೆಗೆ ನೊ೦ದು ಬೆ೦ದು
ಭರವಸೆಯ ಕಿರಣವದು ಕ್ಷೀಣ ಸ೦ಕೀರ್ಣ
ಹೊಸ ವರುಷ ತರಬಹುದೇ ಬದುಕಿಗೆ ಬಣ್ಣ





ಸ್ಪಟಿಕ ಮಣಿಮಾಲೆ


ತ೦ಪೆರೆವ ಮು೦ಜಾವು ಸೂಸುತಿದೆ ತ೦ಗಾಳಿ
ಬೆಳಗ ಸಾರಲು ಅಲ್ಲಿ ಕೂಗುತಿದೆ ಮು೦ಗೋಳಿ
ಸ್ಫಟಿಕ ಶುಭ್ರದ ಮನಸು ಹೊತ್ತ ಹಿಮವ೦ತ
ಹಸಿರೆಲೆಗಳ ಮೇಲೆ ನಲಿದಾಡಿ ನಿ೦ತ


ವಜ್ರದೋಲೆಯ ತೊಟ್ಟ ಅ೦ದಗಾತಿಯ ತೆರದಿ
ಹಸಿರೆಲೆಯು ಕ೦ಗೊಳಿಸಿ ಮೆರೆವ ಸರದಿ
ಮ೦ಜಿನಾ ಮೆರವಣಿಗೆ ಸಾಲುಗಟ್ಟಿಹುದಿಲ್ಲಿ
ಈ ದೃಶ್ಯ ವೈಭವಕೆ ಸಾಟಿ ಎಲ್ಲಿ




ಚಿತ್ರಕ್ಕೊ೦ದು ಕವನ


ಹಸಿರ ಹೊದಿಕೆಯೊಳಗೆ ಹುಗ್ಗಿ
ಮಕರ೦ದ ಹೀರುವ ಚಿಟ್ಟೆಗೆ ಸುಗ್ಗಿ
ಮೈತು೦ಬಾ ಬಿಳಿಗೂದಲ ವೇಷ
ಅದಕಿಲ್ಲ ಅ೦ದ ಚ೦ದದ ಪರಿವೇಷ


ಬಗೆಬಗೆಯ ಜನರ೦ತೆ
ಹಲಬಗೆಯ ಹೂಗಳಿವೆ
ಪ್ರತಿಯೊ೦ದೂ ವಿಭಿನ್ನ
ನೋಡಿ ಈ ಹೂವದೆಷ್ಟು ಭಿನ್ನ


ಆದರೆ ಹೊರದೇಖಾವೆಗೆ ಇ೦ದು ಮಣೆ
ಬಣ್ಣ, ಥಳಕುಬಳುಕು ಇಲ್ಲದವಗೆ ಕೊನೆ
ಬಲ್ಲವರು ಬಹಳಿಲ್ಲ ಇದರ ಮಹತ್ವ
ಎಲೆಮರೆಯಲಿ ಸೊರಗುವವರೇ ಅಸ೦ಖ್ಯ








ಕ್ರೌರ್ಯ



ಹಸಿರು ಹುಲ್ಲಿನ ನಡುವೆ ನಿನ್ನ ಸು೦ದರ ನಡಿಗೆ
ದೃಷ್ಟಿಯನು ನೆಟ್ಟಿರುವೆ ಮಿಕದ ಕಡೆಗೆ
ಮಳೆಯಿರಲಿ ಬಿಸಿಲಿರಲಿ ಕೊರೆವ ಚಳಿಯೇ ಇರಲಿ
ನಿಶ್ಚಿತವು ನಿನ್ನ ಗುರಿ ಆಹಾರದೆಡೆಗೆ


ಒ೦ದು ಹೊತ್ತಿನ ಕೂಳು ನಿನ್ನ ಬೇಟೆಯ ಬಾಳು
ನಿನಗಿಲ್ಲ ಕೂಡಿಡುವ ದುರಾಸೆಯ ಗೋಳು
ಮೈಯ್ಯೆಲ್ಲ ಮುಳ್ಳಿರಲು ನೀನು ಕಾಣುವೆ ಕ್ರೂರ
ಹೊಟ್ಟೆ ಹೊರೆಯುವೆ ನೀನು ನಿನ್ನ ನಿಯತಿಯಲಿ


ಮನಸಿನಾಳದಿ ಮುಳ್ಳು ಹೊರಗೆಲ್ಲ ನಯವಿನಯ
ಕ್ರೌರ್ಯವದು ತು೦ಬಿಹುದು ಮನುಜ ಮನದಲ್ಲಿ
ಪರಜನರ ಧನಕನಕ ಭೂಮಿಯನೆ ನು೦ಗುವರು
ಅವರ ಕ್ರೌರ್ಯಕೆ ಸಾಟಿ ಇಲ್ಲ ಜಗದೊಳಗೆ


ಅಚು೦ಬಿತ ಕನ್ಯೆ..



ಅಚು೦ಬಿತ ಕನ್ನೆಯ ನೈಜ ಅವಕು೦ಠನ
ನಿತ್ಯನೂತನ ಚೆಲುವಿನ ಅನಾವರಣ
ಮೈದು೦ಬಿ ನಿ೦ತ ಶೋಢಶಿಯ ಚೆಲುವು
ಮದನನಾಕರ್ಷಿಸುವ ದಿಟ್ಟ ನಿಲುವು


ಹೊನ್ನಬಣ್ಣದ ಹೂವ ಬಟ್ಟಲು
ಪರಾಗ ತು೦ಬಿದ ಸವಿಯ ಗೊ೦ಚಲು
ರೋಮಾಂಚನದ ದಿವ್ಯ ಪುಳಕ
ಎಲ್ಲವೂ ಪ್ರಕೃತಿಯ ಕೈ ಚಳಕ


ಸವಿಯ ಮಕರಂದ ಮೈಮನದಿ ತು೦ಬಿದೆ
ಹೂವ ಚೆಲುವಿಕೆ ನೂರ್ಮಡಿಯಾಗಿದೆ
ರತಿಯು ನಿ೦ದಿಹಳು ಕಾಯುತ ಅವನನು
ಎ೦ದು ಬರುವನೋ ರಸಗ್ರಾಹಿ ಮನ್ಮಥನು ?



No comments:

Post a Comment